Foods That Reduce Body Heat During Summer | Boldsky Kannada

2020-05-06 11

ಕಾಲಕ್ಕೆ ತಕ್ಕಂತೆ ನಮ್ಮ ಆಹಾರಕ್ರಮ ಬದಲಾಯಿಸಬೇಕಾಗುತ್ತದೆ. ಅದರಲ್ಲೂ ಸೀಸನಲ್ ಫುಡ್ಸ್ ಅಂದರೆ ಆ ಸಮಯದಲ್ಲಿ ದೊರೆಯುವಂಥ ಹಣ್ಣು-ಹಂಪಲುಗಳ ಸೇವನೆ ತುಂಬಾ ಒಳ್ಳೆಯದು. ಇದೀಗ ಬೇಸಿಗೆ ಕಾಲ. ಈ ಕಾಲದಲ್ಲಿ ನಾವು ದೇಹವನ್ನು ತಂಪಾಗಿಡುವ ಆಹಾರಗಳ ಸೇವನೆ ಮಾಡುವುದು ಒಳ್ಳೆಯದು. ಇದೀಗ ಎಲ್ಲರೂ ಬರೀ ಕೊರೊನಾವೈರಸ್‌ ತಡೆಗಟ್ಟುವುದು ಹೇಗೆ ಎಂದು ಯೋಚಿಸಿ, ಇತರ ಆರೋಗ್ಯ ಸಮಸ್ಯೆಗಳತ್ತ ಹೆಚ್ಚಿನ ಗಮನ ನೀಡುತ್ತಿಲ್ಲ, ಪರಿಣಾಮ ಆ ಆರೋಗ್ಯ ಸಮಸ್ಯೆಗಳು ಕಾಡಲಾರಂಭಿಸುತ್ತವೆ. ಬೇಸಿಗೆಯಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳನ್ನು ನಮ್ಮ ಆಹಾರಕ್ರಮದಲ್ಲಿ ಬದಲಾವಣೆ ತಂದು ಅಂದರೆ ದೇಹವನ್ನು ತಂಪಾಗಿಡುವ ಆಹಾರಗಳ ಸೇವನೆ ಮೂಲಕ ತಡೆಗಟ್ಟಬಹುದಾಗಿದೆ. ಬೇಸಿಗೆಯಲ್ಲಿ ಬಾಡಿ ಹೀಟ್ ಅಂದರೆ ದೇಹದ ಉಷ್ಣತೆ ಹೆಚ್ಚಾಗುವ ಸಮಸ್ಯೆ ಕೆಲವರಲ್ಲಿ ಕಂಡು ಬರುತ್ತದೆ, ಹಾಗಂತ ಇದನ್ನು ನಿರ್ಲಕ್ಷ್ಯ ಮಾಡಿದರೆ ದೇಹದ ಅಂಗಾಂಗಗಳು, ಸ್ನಾಯುಗಳ ಸೆಳೆತ, ಬೆವರು ಸಾಲೆಗಳು, ಮೊಡವೆ, ತಲೆಸುತ್ತು, ವಾಂತಿ ಮುಂತಾದ ಗಂಭೀರವಾದ ಆರೋಗ್ಯ ಸಮಸ್ಯೆ ಉಂಟು ಮಾಡಬಹುದು. ಬಿಸಿಲಿನಲ್ಲಿ ಹೊರಗಡೆ ತಿರುಗಾಡುವುದು, ಬಿಸಿಲಿನಲ್ಲಿ ಕೆಲಸ ಮಾಡುವುದು, ದೇಹದ ಉಷ್ಣತೆ ಹೆಚ್ಚು ಮಾಡುವ ಆಹಾರಗಳ ಸೇವನೆ, ಕಡಿಮೆ ಪ್ರಮಾಣದಲ್ಲಿ ನೀರು ಕುಡಿಯುವುದು ಇವೆಲ್ಲಾ ದೇಹದ ಉಷ್ಣತೆ ಹೆಚ್ಚು ಮಾಡುವುದು. ದೇಹದ ಉಷ್ಣತೆ ಕಡಿಮೆ ಮಾಡಲು ದೇಹವನ್ನು ತಂಪಾಗಿಸುವ ಈ ಹಣ್ಣುಗಳನ್ನು ಸೇವಿಸಿ: